Sunday, 18 March 2018

8th STANDARD ENGLISH MEDIUM PPT

9th STANDARD ENGLISH MEDIUM PPT

10th STANDARD ENGLISH MEDIUM PPT

Saturday, 17 March 2018

ರಾಮಚಂದ್ರ .ಕೆ.ಎಸ್




ರಾಮಚಂದ್ರ ಕರೂರು ಸೀನಪ್ಪ
    ಶ್ರೀಯುತ ರಾಮಚಂದ್ರ ಕರೂರು ಸೀಪ್ಪನವರು ಶಿವಮೊಗ್ಗ ನಗರದಲ್ಲಿ ವಾಸವಾಗಿದ್ದು ದಿನಾಂಕ ೦೪-೦೨-೧೯೭೪ರಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಜನಿಸಿರುತ್ತಾರೆ. ಇವರು ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ, ಜೋಗ, ಕಾರ್ಗಲ್, ಭದ್ರಾವತಿ, ತಿರ್ಥಹಳ್ಳಿಯಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿದ್ದು ಎಂ.ಎ. ಬಿ.ಇಡಿ. ಪದವಿಧರರಾಗಿದ್ದಾರೆ. ಇವರು ದಿನಾಂಕ ೦೩-೦೧-೨೦೬ರಂದು ಸರ್ಕಾರಿ ಪ್ರೌಢಶಾಲಾ ಶಿಕ್ಷಕರಾಗಿ ಸರ್ಕಾರಿ ಪ್ರೌಢಶಾಲೆ ಅತ್ತಿಹಳ್ಳಿ ಕನಕಪುರದಲ್ಲಿ ನೇಮಕಗೊಂಡು ಪ್ರಸ್ತುತ ಸರ್ಕಾರಿ ಪ್ರೌಢಶಾಲೆ ಟಿ.ಗೋಪಗೊಂಡನಹಳ್ಳಿ ನ್ಯಾಮತಿ ತಾ. ದಾವಣಗೆರೆ ಜಿಲ್ಲೆಯಲ್ಲಿ ಸಮಾಜವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
     ಶ್ರೀಯುತರು ರಚನಾ ೨ ಮತ್ತು ೩ರಲ್ಲಿ ಜಿಲ್ಲಾ ಎಂ.ಆರ್.ಪಿ.ಯಾಗಿ ಕಾರ್ಯನಿರ್ವಹಿಸಿದ್ದು ಸುಗಮ ಹಾಗೂ ಜನರಲ್ ಕಾರ್ಯಗಾರದಲ್ಲಿ ಐಸಿಟಿ ಇನ್ ಕ್ಲಾಸ್ ರೂಪ್ ವಿಷಯದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿರುತ್ತಾರೆ. ಅಲ್ಲದೆ ಕೋಯರ್ನ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿರುತ್ತಾರೆ.
     ರಾಮಚಂದ್ರರವರು ಪ್ರಸ್ತುತ ಕರ್ನಾಟಕ ಸರ್ಕಾರದ ವಿಶಿಷ್ಟ ಯೋಜನೆಯಾದ ಪ್ರಾಥಮಿಕ ಶಾಲಾ ಶಿಕ್ಷಕರ ಬಲವರ್ಧನೆಗಾಗಿ ರೂಪುಗೊಂಡ ’ಗುರುಚೇತನ’ ಕಾರ್ಯಕ್ರಮದಲ್ಲಿ ರಾಜ್ಯಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ’ಅಕ್ಷಾಂಶ ಮತ್ತು ರೇಖಾಂಶ’ , ’ಸಂವಿಧಾನ ಪರಿಕಲ್ಪನೆ’ ಹಾಗೂ ’ಶಿಕ್ಷಕರ ಬಲವರ್ಧನೆಯಲ್ಲಿ ಐಸಿಟಿಯ ಪಾತ್ರ’ ಮಾಡ್ಯೂಲ್ ನಿರ್ಮಾಣದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅದರ ಅನುಷ್ಟಾನ ಕಾರ್ಯಗಾರದಲ್ಲೂ ಭಾಗವಹಿಸಿರುತ್ತಾರೆ. ಪ್ರಸ್ತುತ ’ಮಾರುತಗಳು’ ಮಾಡ್ಯೂಲ್ ನಲ್ಲಿ ಮೆಂಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
     ಇವರು ತಮ್ಮ ವೃತ್ತಿಯಲ್ಲಿ ಯಶಸ್ವಿ ಶಿಕ್ಷಕರಾಗಿ ತೊಡಗಿಕೊಂಡಿದ್ದು ಅನೇಕ ಪ್ರಶಸ್ತಿಗಳಿಗೂ ಬಾಜನರಾಗಿರುತ್ತಾರೆ. ಇವರು ೨೦೦೭ರಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆಗಾಗಿ ಮೈಕ್ರೋಸಾಪ್ಟ್ ಇಂಡಿಯಾರಿಂದ ’ITLA’ (Inovative Teachers Leadership Award) ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿರುತ್ತಾರೆ. ೨೦೦೮ರಲ್ಲಿ ಮೈಕ್ರೋಸಾಪ್ಟ್ ಇಂಡಿಯ ಹಾಗೂ ಯುನೆಸ್ಕೋರವರ ಸಹಯೋಗದಲ್ಲಿ ವಿಯೇಟ್ನಾಮ್ನ ರಾಜಧಾನಿ ’ಹಾನೊಯ್’ನಲ್ಲಿ ನಡೆದ ಆಸ್ಟ್ರೋ ಏಷ್ಯಾ ರೀಜಿನಲ್ ಕಾನ್ಪರೆನ್ಸ್ ನಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿರುತ್ತಾರೆ. ೨೦೧೬ರಲ್ಲಿ ಇವರಿಗೆ ದಾವಣಗೆರೆಯ ಜಿಲ್ಲೆಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅಲ್ಲದೆ ಇದೇ ವರ್ಷ ಪಬ್ಲಿಕ್ ಟಿ.ವಿ.ಯ ಪಬ್ಲಿಕ್ ಹೀರೋ ಆಗಿ ಡಿಜಿಟಲ್ ತಂಡದ ಪರವಾಗಿ ಗೌರವಿಸಲಾಗಿದೆ.

ಸಂತೋಷ್ ಕುಮಾರ್ .ಸಿ




ಸಂತೋಷ್ ಕುಮಾರ್ .ಸಿ

    ಇವರು ಮೂಲತಃ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಸುರಹೊನ್ನೆ ಗ್ರಾಮದವರು. 2010ನೇ ಸಾಲಿನಲ್ಲಿ ಪ್ರೌಢಶಾಲಾ ಸಹಶಿಕ್ಷಕರಾಗಿ ಸರ್ಕಾರಿ ಪ್ರೌಢಶಾಲೆ ಬನ್ನಿಕಲ್ಲು, ಹಗರಿಬೊಮ್ಮನ ಹಳ್ಳಿ ತಾಲ್ಲೂಕು ಬಳ್ಳಾರಿ ಜಿಲ್ಲೆ ಇಲ್ಲಿಗೆ ನಿಯೋಜನೆಗೊಂಡರು. ಪ್ರಸ್ತುತ ಇದೇ ಶಾಲೆಯಲ್ಲಿ ಕೆಳದ ಏಳು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
   ರಚನಾ-3 ತರಬೇತಿ ಕಾರ್ಯಾಗಾರ ಎಂ.ಆರ್.ಪಿ. ಯಾಗಿಯೂ ಕೆಲಸ ಮಾಡಿರುವ ಇವರು 2016ರಲ್ಲಿ ಪ್ರಾರಂಭವಾದ ಸಮಾಜ ವಿಜ್ಞಾನ ಎಸ್.ಟಿ.ಎಫ್ ಡಿಜಿಟಲ್ ತಂಡ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದಾರೆ. ಸಮಾಜ ವಿಜ್ಞಾನ ಎಸ್.ಟಿ.ಎಫ್ ಡಿಜಿಟಲ್ ತಂಡದ ಸಕ್ರಿಯ ಸದಸ್ಯರಾಗಿರುವ ಇವರು ಸಮಾಜ ವಿಜ್ಞಾನ ಸಂಪನ್ಮೂಲಗಳ ಹಂಚಿಕೆಗೆ ಸಹಕಾರಿಯಾಗಿರುವ ಸಮಾಜ ವಿಜ್ಞಾನ ಬ್ಲಾಗ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಸಹಕಾರಿಯಾಗಿರುವ ಸಕ್ಸಸ್ ಬ್ಲಾಗ್ ಮತ್ತು ಜೀನಿಯಸ್ ಬ್ಲಾಗ್ ಗಳ ನಿರ್ಮಾತೃವಾಗಿದ್ದಾರೆ.
   8, 9, 10ನೇ ತರಗತಿಗಳ ಹಲವು ಆಕರ್ಷಕ ಪಿಪಿಟಿಗಳು, ನಮ್ಮ ಚಾಣಕ್ಯ ಹಾಗೂ ಮಾಸ್ಟರ್ ಆಫ್ ಸೋಷಿಯಲ್ ಸೈನ್ಸ್ ಎಂಬ ಬಹುಆಯ್ಕೆ ಪ್ರಶ್ನೆಗಳ ಕ್ಷಿಜ್, ಲಕ್ಕಿ ನಂಬರ್ ಎಂಬ ಒಂದು ಅಂಕದ ಪ್ರಶ್ನೆಗಳ ಕ್ವಿಜ್, ಜಾಕ್ ಪಾಟ್ ಎಂಬ ಎರಡು ಅಂಕದ ಪ್ರಶ್ನೆಗಳ ಕ್ವಿಜ್ (ಪಿಪಿಟಿ ಆಧಾರಿತ), ಆನ್ ಲೈನ್ ಕ್ವಿಜ್ ಗಳನ್ನು ತಯಾರಿಸಿದ್ದಾರೆ.
   ಹತ್ತನೇ ತರಗತಿಯ ಫಲಿತಾಂಶ ಸುಧಾರಣೆಗಾಗಿ “ಜೀನಿಯಸ್” ಎಂಬ ಸ್ಕೋರಿಂಗ್ ಪ್ಯಾಕೇಜ್, ಸಿದ್ಧತೆಯೆಂಬ ಪ್ರಶ್ನೆಪತ್ರಿಕೆಗಳ ಮಾಲಿಕೆ, ಪಾಸಿಂಗ್ ಕಾರ್ಡ್ಸ್, ಮಿಷನ್-28, ಮಿಷನ್ ಒನ್ ಮಾರ್ಕ್ಸ್ ಹೀಗೆ ಹಲವು ಪಾಸಿಂಗ್ ಪ್ಯಾಕೇಜ್ ಗಳನ್ನು ಸಿದ್ಧಪಡಿಸಿದ್ದಾರೆ. ಹತ್ತನೇ ತರಗತಿಯ ಪಾಠಗಳ ಸಂಪೂರ್ಣ ವಿಡಿಯೋ ನೋಟ್ಸ್ ಹಾಗೂ ಆಡಿಯೋ ನೋಟ್ಸ್ ಗಳನ್ನು ತಯಾರಿಸಿದ್ದಾರೆ. ಅಲ್ಲದೇ ಡಿಜಿಟಲ್ ತಂಡದಿಂದ ಹೊರಬಂದಿರುವ ಅನ್ವೇಷಣೆ, ಸವಿ ದಿಕ್ಸೂಚಿ, ಎಕ್ಸಲೆಂಟ್, ಬ್ರಿಲಿಯಂಟ್, ಸಿ.ಎಸ್.ಎ.ಎಸ್ ನೋಟ್ಸ್ ಹೀಗೆ ಪ್ರತಿಕಾರ್ಯದಲ್ಲಿಯೂ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. 

ಮಹದೇವಪ್ಪ ಕುಂದರಗಿ




ಮಹಾದೇವಪ್ಪ ಕುಂದರಗಿ, ಸಹ ಶಿಕ್ಷಕರು
ಸರ್ಕಾರಿ ಪ್ರೌಢ ಶಾಲೆ ಆವತಿ, ಚಿಕ್ಕಮಗಳೂರು ತಾ & ಜಿ.
ಮೊ : 9481216233
ಇವರು ಮೂಲತಃ ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕಿನ ಕೌಜಲಗಿ ಗ್ರಾಮದವರು. ಪ್ರೌಢ ಶಾಲಾ ಸಹ ಶಿಕ್ಷಕರಾಗಿ 2010 ರಲ್ಲಿ ಸೇವೆಗೆ ಸೇರಿದ್ದು ಚಿಕ್ಕಮಗಳೂರಿನ ಸರ್ಕಾರಿ ಪ್ರೌಢ ಶಾಲೆ ಆವತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೊಯೆರ್ (ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲ) ನಲ್ಲಿ ರಾಜ್ಯಮಟ್ಟದ ಸಂಪನ್ಮೂಲ ತಯಾರಿಕಾ ಸದಸ್ಯರಾಗಿ ಹಾಗೂ ಸಮಾಜ ವಿಜ್ಞಾನ ವಿಷಯ ಶಿಕ್ಷಕರ ವೇದಿಕೆ (ಎಸ್.ಟಿ.ಎಫ್) ತರಬೇತಿ, ರಚನಾ ತರಬೇತಿ, ಸಾಮಾನ್ಯ ವಿಷಯಗಳ ತರಬೇತಿ ಹಾಗೂ ಸಿ.ಸಿ.ಇ. ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಎಸ್.ಎಸ್.ಎಲ್.ಸಿ.ಯ ಜಿಲ್ಲಾ ಹಾಗೂ ವಿಭಾಗ ಮಟ್ಟದ ನೀಲನಕಾಶೆ ಕಾರ್ಯಾಗಾರಗಳಲ್ಲಿ ಭಾಗವಹಿಸಿ ಸಾಕಷ್ಟು ಅನುಭವ ಪಡೆದ ಇವರು ಎಸ್.ಎಸ್.ಎಲ್.ಸಿ. ಗೆ ಸಂಬಂಧಿಸಿದ ಪದಬಂಧಗಳು, ಪಿರಾಮಿಡ್ಡುಗಳು, ಸವಿ ದಿಕ್ಸೂಚಿ (ಹಿಂದಿನ ಪ್ರಶ್ನೆಪತ್ರಿಕೆಗಳ ವಿಶ್ಲೇಷಣೆ), ಅನ್ವೇಷಣೆ (ಚಟುವಟಿಕೆಗಳ ಕೈಪಿಡಿ) ಇವರ ನೇತೃತ್ವದಲ್ಲಿ ಮೂಡಿಬಂದ ರಚನೆಗಳಾಗಿವೆ. ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದ ಪಿಪಿಟಿ, ರಸಪ್ರಶ್ನೆಗಳ ಪಿಪಿಟಿ ಹಾಗೂ ನೋಟ್ಸ್ ಮುಂತಾದ ಸಂಪನ್ಮೂಲಗಳ ತಯಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಇವರು ಡಿಜಿಟಲ್ ತಂಡದ ಒಬ್ಬ ಸಕ್ರಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಸಂತ್ ಕುಮಾರ್ ಶ್ಯಾಗೋಟಿ



ವಸಂತಕುಮಾರ ಶ್ಯಾಗೋಟಿ. ಸಹ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ ಹದಲಿ. ತಾ : ನರಗುಂದ,ಜ ಜಿ:ಗದಗ
ಮೊ: 9964031435
    ಇವರು ಮೂಲತ: ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಚಿಕ್ಕಸವನೂರ ಗ್ರಾಮದವರು. ಪ್ರೌಢಶಾಲಾ ಸಹ ಶಿಕ್ಷಕರಾಗಿ 200 8 ರಲ್ಲಿ ಸೇವೆಗೆ ಸೇರಿದ್ದು ಹಾಸನ ಜಿಲ್ಲೆ, ಆಲೂರು ತಾಲೂಕು ಕಲ್ಲಾರೆ ಗ್ರಾಮದಲ್ಲಿ 7ವರ್ಷ ಸೇವೆ ಸಲ್ಲಿಸಿ ಪ್ರಸ್ತುತ  ಗದಗ ಜಿಲ್ಲೆಯ ನರಗುಂದ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಹದಲಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಮಾಜವಿಜ್ಞಾನ ಎಸ್.ಟಿ.ಎಫ್. ಡಿಜಿಟಲ್ ಗ್ರೂಪ್ನ ಒಬ್ಬ ಕ್ರಿಯಾಶೀಲ ಸದಸ್ಯರಾಗಿದ್ದು ಎಸ್.ಎಸ್.ಎಲ್.ಸಿ ಸಮಾಜವಿಜ್ಞಾನ ವಿಷಯದ "ಉತ್ತೀರ್ಣ" ಪಾಸಿಂಗ್ ಮತ್ತು ಸ್ಕೋರಿಂಗ್ ಪ್ಯಾಕೇಜ್ ತಯಾರಿಸಿರುತ್ತಾರೆ. ಇವರ ನೇತೃತ್ವದಲ್ಲಿ 8ನೇ ತರಗತಿಯ ಸಮಾಜವಿಜ್ಞಾನ ನೋಟ್ಸ್ "ಬ್ರಿಲಿಯಂಟ್" "ಎನ್.ಎಮ್.ಎಮ್.ಎಸ್". ನೋಟ್ಸ್ ತಯಾರಿಸಲಾಗಿದೆ ಹಾಗೂ ತಂಡದ ವಿವಿಧ ಕೊಡುಗೆಗಳಲ್ಲಿ ಸಕ್ರೀಯ ಸದಸ್ಯರಾಗಿ ಭಾಗವಹಿಸಿದ್ದಾರೆ. 8 ನೇ ತರಗತಿಯ ಸಂಪೂರ್ಣ ಅಧ್ಯಾಯಗಳಿಗೆ  "ನಮ್ಮ ಚಾಣಕ್ಯ" ಎನ್ನುವ ಕ್ವಿಜ್ ಪಿಪಿಟಿ ಗಳನ್ನು ತಯಾರಿಸಿರುತ್ತಾರೆ. ಸಮಾಜ ವಿಜ್ಞಾನ ವಿಷಯದ ಅನೇಕ ಪಿಪಿಟಿ ಗಳನ್ನು ಮಾಡಿ ಡಿಜಿಟಲ್ ಸಂಪನ್ಮೂಲಗಳ ತಯಾರಿಕೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುತ್ತಾರೆ.  ಡಿ.ಎಸ್.ಇ.ಆರ್.ಟಿ ಯ ಇ-ಕಟೆಂಟ್ ತಯಾರಿಕಾ ಸದಸ್ಯರಾಗಿ, ಫಲಿತಾಂಶ ಸುಧಾರಣಾ ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ್ದಾರೆ.  ಪಿಪಿಟಿ, ರಸಪ್ರಶ್ನೆಗಳು, ಪ್ರಶ್ನೆ ಪತ್ರಿಕೆಗಳು ಮುಂತಾದ ಸಂಪನ್ಮೂಲಗಳ ತಯಾರಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಇವರು ಡಿಜಿಟಲ್ ತಂಡದ ಒಬ್ಬ ಸಕ್ರಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಶಾಂತ್ .ಟಿ




ಪ್ರಶಾಂತ ಟಿ ಕೆ
ಸಹ ಶಿಕ್ಷಕರು, ಸ.ಪ.ಪೂ.ಕಾಲೇಜು (ಪ್ರೌ.ಶಾ.ವಿ),
ಲಿಂಗದಹಳ್ಳಿ, ತರೀಕೆರೆ ತಾ||, ಚಿಕ್ಕಮಗಳೂರು ಜಿಲ್ಲೆ.
 ಇವರು 05-11-1998 ರಂದು ಸರ್ಕಾರಿ ಪ್ರೌಢಶಾಲೆ, ಅಂಗಡಿ ಗ್ರಾಮ, ಚಿಕ್ಕಮಗಳೂರು ಜಿಲ್ಲೆ ಇಲ್ಲಿ ಸಮಾಜ ವಿಜ್ಞಾನ ಶಿಕ್ಷಕರಾಗಿ ಸೇವೆಯನ್ನು ಆರಂಭಿಸಿ, ಪ್ರಸ್ತುತ ಸ.ಪ.ಪೂ.ಕಾಲೇಜು (ಪ್ರೌ.ಶಾ.ವಿ), ಲಿಂಗದಹಳ್ಳಿ, ತರೀಕೆರೆ ತಾ||, ಚಿಕ್ಕಮಗಳೂರು ಜಿಲ್ಲೆ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.ಸಮಾಜ ವಿಜ್ಞಾನ ವಿಷಯದ ರಚನಾ ಹಾಗೂ ಸುಗಮ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. 2016 ರಿಂದ ಸಮಾನ ಮನಸ್ಸಿನ ಡಿಜಿಟಲ್ ತಂಡದಲ್ಲಿ ಒಬ್ಬ ಸದಸ್ಯರಾಗಿರುತ್ತಾರೆ.ಕನ್ನಡ ಮಾಧ್ಯಮದ ಜೊತೆಗೆ ಇಂಗ್ಲಿಷ್ ಮಾಧ್ಯಮದಲ್ಲಿಯೂ ಸಹ ಸಂಪನ್ಮೂಲ ತಯಾರಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ವೀರೇಶ್ .ಪಿ


ನಾಗು ಶಹಬಾದ್


ಪ್ರದೀಪ್ ಎಸ್.ಎನ್


ರಮೇಶ್ ಹುನಗುಂದ


ರಮೇಶ್ .ಎಂ


ಕಾಂತೇಶ್ .ಟಿ


ಪ್ರೇಮನಗೌಡ ಪಾಟೀಲ್


ಭೀಮಸೇನ್ ಜೊಲಾಪುರೆ


ಶರಣಬಸಪ್ಪ ಗುಡೂರು


ಮಲ್ಲಿಕಾರ್ಜುನ್ ಸ್ವಾಮಿ .ಟಿ.ಎಮ್




ಮಲ್ಲಿಕಾರ್ಜುನಸ್ವಾಮಿ ಟಿ.ಎಂ, ಸಹ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ ಚವಲಿಹಳ್ಳಿ ಗೊಲ್ಲರಹಟ್ಟಿ, ಚಿತ್ರದುರ್ಗ ತಾ & ಜಿಲ್ಲೆ
ಮೊ: 9901382595
    ಇವರು ಮೂಲತ: ಚಿತ್ರದುರ್ಗ ಜಿಲ್ಲೆ ಚಿತ್ರದುರ್ಗ ತಾಲೂಕಿನ ಕೋಗುಂಡೆ ಗ್ರಾಮದವರು.ಪ್ರೌಢಶಾಲಾ ಸಹ ಶಿಕ್ಷಕರಾಗಿ 2007 ರಲ್ಲಿ ಸೇವೆಗೆ ಸೇರಿದ್ದು,ಪ್ರಸ್ತುತ  ಚಿತ್ರದುರ್ಗ ತಾ & ಜಿಲ್ಲೆಯಲ್ಲಿನ ಸರ್ಕಾರಿ ಪ್ರೌಢಶಾಲೆ ಚವಲಿಹಳ್ಳಿ ಗೊಲ್ಲರಹಟ್ಟಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಡಿ.ಎಸ್.ಇ.ಆರ್.ಟಿ ಯ ಇ-ಕಟೆಂಟ್ ತಯಾರಿಕಾ ಸದಸ್ಯರಾಗಿ ,ಸುಗಮ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ  ಮತ್ತು ಆಕಾಶವಾಣಿಯಲ್ಲಿ ವಿಷಯ ಸಂಪನ್ಮೂಲ ವ್ಯಕ್ತಿಯಾಗಿ ಹಲವಾರು ಬಾರಿ ಭಾಗವಹಿಸಿರುತ್ತಾರೆ. 50ಕ್ಕೂ ಹೆಚ್ಚು ಸಾಂಸ್ಕೃತಿಕ ಸಭಾ ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ “ಜೂನಿಯರ್ ಕೃಷ್ಣೇಗೌಡ” ಎಂಬ ಬಿರುದನ್ನು ಪಡೆದಿರುತ್ತಾರೆ. ಪಿಪಿಟಿ,ರಸಪ್ರಶ್ನೆಗಳು ಮುಂತಾದ ಸಂಪನ್ಮೂಲಗಳ ತಯಾರಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಇವರು ಡಿಜಿಟಲ್ ತಂಡದ ಒಬ್ಬ ಸಕ್ರಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಡಾ. ದಾನಮ್ಮ ಜಳಕಿ




ಡಾ. ದಾನಮ್ಮ ಚ ಝಳಕಿ, ಸಹಶಿಕ್ಷಕಿ
ಸರಕಾರಿ ಪ್ರೌಢ ಶಾಲೆ, ವಂಟಮುರಿ ಕಾಲನಿ, ಬೆಳಗಾವಿ ನಗರ, ಬೆಳಗಾವಿ.
 9449384611

ಇವರು ಮೂಲತಃ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಗ್ರಾಮದವರು. 1997 ರಲ್ಲಿ ಸರಕಾರಿ ಪ್ರೌಢ ಶಾಲೆಗೆ ಸಹಶಿಕ್ಷಕರಾಗಿ ಸೇವೆಗೆ ಸೇರಿದ್ದು, 1997 ರಿಂದ 2006 ರವರೆಗೆ ಸರಕಾರಿ ಪ್ರೌಢ ಶಾಲೆ, ಸುಳೇಭಾವಿ, ತಾಲ್ಲೂಕು ಬೆಳಗಾವಿಯಲ್ಲಿ ಹಾಗೂ 2006 ರಿಂದ 2012 ರವರೆಗೆ ಸರಕಾರಿ ಸರ್ದಾರ್ಸ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗದಲ್ಲಿ ಸೇವೆ ಸಲ್ಲಿಸಿದರು. 2012 ರಿಂದ 2014 ರವರೆಗೆ ಬೆಳಗಾವಿ ನಗರವಲಯದಲ್ಲಿ ಬಿ ಆರ್ ಪಿ ಯಾಗಿ ಸೇವೆ ಸಲ್ಲಿಸಿದರು. ಪ್ರಸ್ತುತ 2014 ರಿಂದ ಸರಕಾರಿ ಪ್ರೌಢ ಶಾಲೆ, ವಂಟಮುರಿಯಲ್ಲಿ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2016 ರಿಂದ ನಿಯೋಜನೆಯ ಮೇರೆಗೆ ಡಿ ಎಸ್ ಇ ಆರ್ ಟಿ ಯಲ್ಲಿ ಗುರುಚೇತನ ಎಂಬ ವಿಶ್ವದಲ್ಲಿಯೇ ವಿನೂತನವಾದ ಶಿಕ್ಷಕರ ಸಾಮಥ್ಯ ಅಭಿವೃದ್ಧಿ (ಟಿ ಪಿ ಡಿ) ಎಂಬ ಕಾರ್ಯಕ್ರಮದಲ್ಲಿ, ಸಮಾಜ ವಿಜ್ಞಾನ ವಿಷಯದ ಮಾಡ್ಯೂಲ್ ಬರವಣೆಗೆ ಹಾಗೂ ರಾಜ್ಯ ಮಟ್ಟದ ತರಬೇತಿ ನೀಡಲು ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ನಿಯೋಜನೆಗೊಂಡಿರುವರು. ಓದುವ ಹಾಗೂ ಕಲಿಯಬೇಕೆಂಬ ಹವ್ಯಾಸದಿಂದ M.A(Sociology), M.A(History), Med, Mphil, ಹಾಗೂ Phd  ಹೀಗೆ ಸ್ನಾತಕೋತ್ತರ ಮತ್ತು ಡಾಕ್ಡರೇಟ್ ನ್ನು ಮಾಡಿದ್ದಾರೆ. Dsert ಯಲ್ಲಿ 1) CCE ಸಮೀಕ್ಷೆ ಪ್ರಶ್ನಾವಳಿ, 2) ಸುಗಮ ಸಾಹಿತ್ಯದ ರಚನೆ,  3) ಟಿ ಪಿ ಡಿ ಯಲ್ಲಿ ಅಕ್ಷಾಂಶ ಮತ್ತು ರೇಖಾಂಶ ಹಾಗೂ 4) ಸಂವಿದಾನ ಪರಿಕಲ್ಪನೆ ಎಂಬ ಮಾಡ್ಯೂಲ್ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ರಾಜ್ಯ ಮಟ್ಟದಲ್ಲಿ 1 ಬುನಾದಿ ತರಬೇತಿ- ಬೆಳಗಾವಿ ಸಿ ಟಿ ಇ , 2 ಸುಗಮ ತರಬೇತಿ ಮೈಸೂರು ಸಿ ಟಿ ಇ, 3. STF 4. KOER   5. TPD    7. CCE  ಹೀಗೆ ಅನೇಕ ಕಾರ್ಯಾಗಾರಗಳಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ, ಕಾರ್ಯಮಾಡಿದ್ದಾರೆ. ಅಲ್ಲದೇ ಎಸ್ ಎಸ್ ಎಲ್ ಸಿ ಬೋರ್ಡ ದಲ್ಲಿ ಪ್ರಶ್ನೆ ಪತ್ರಿಕೆಯ ತಯಾರಿ ಕಾರ್ಯದಲ್ಲೂ ಸಹ ಎರಡು ಮೂರು ಬಾರಿ ಕಾರ್ಯ ಮಾಡುವ ಸೌಭಾಗ್ಯವೂ ಸಹ ದೊರೆತಿದೆ. ರಾಜ್ಯ ಮಟ್ಟದಲ್ಲಿ ಎಸ್ ಆರ್ ಪಿ ಯಾಗಿ, ರಚನಾ 1, 2, 3 ತರಬೇತಿಗಳು,RTE , NCF, CCE, ಮತ್ತು  KSQAAC ತರಬೇತಿಗಳಲ್ಲಿ ಸಹ ಪಾಲ್ಗೊಂಡಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಸಿ ಟಿ ಇ ಹಾಗೂ ಡಯಟ್ ಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ತರಬೇತಿಗಳನ್ನು ನೀಡಿದ್ದಾರೆ. ಅಲ್ಲದೇ, ಕರ್ನಾಟಕ ಬಾಲವಿಕಾಸ ಅಕಾಡೆಮಿಯಲ್ಲಿ 2013-2014 ರಲ್ಲಿ ಸಂಶೋಧನಾ ಫೆಲೋಶಿಪ್‍ದಡಿಯಲ್ಲಿ, ಮಕ್ಕಳ ವ್ಯಕ್ತಿತ್ವದಲ್ಲಿ ಅಜ್ಜ ಅಜ್ಜಿಯರ ಪಾತ್ರ ಎಂಬ ವಿಷಯದ ಮೇಲೆ ಸಂಶೋಧನೆಯನ್ನು ಕೈಗೊಂಡು ಕೃತಿಯನ್ನು ಸಹ ಸಲ್ಲಿಸಿದ್ದಾರೆ.
      ಸಂಶೋಧನಾ ಆಸಕ್ತಿಯು ಲೇಖನಗಳನ್ನು ಬರೆಯಲು ಪ್ರೇರೆಪಿಸಿದ್ದರಿಂದ ಅನೇಕ ಸಂಶೋಧನಾ ಲೇಖನಗಳನ್ನು State, National and International  ಗ್ರಂಥಗಳಲ್ಲಿ ಲೇಖನಗಳು ಪ್ರಕಟವಾಗಿವೆ. ಈ ಎಲ್ಲ ಲೇಖನಗಳೂ ಸಹ ISBN ದಡಿಯಲ್ಲಿ ಪ್ರಕಟವಾಗಿರುವುದನ್ನು ತಿಳಿಸಲು ಅತೀವ ಸಂತೋಷವಾಗುತ್ತದೆ. ಆ ಪ್ರಮುಖ ಪ್ರಕಟನೆಗಳೆಂದರೆ,
1.   New trends and Challenges in Sociology Reference to Muslim Girls Education, By  Danamma. C. Zalaki, International Journal of Multidisciplinary Research (IJMR),ISSN: 2277-9302, vol.IV,Issue 1(1),April 2015. Published by Jai Hind Sciety,Pune.
2.   ಒಳಗೊಂಡ ಶಿಕ್ಷಣದ ಸಾಮಾಜಿಕ ಸವಾಲುಗಳು, By ದಾನಮ್ಮ ಝಳಕಿ, International Conference on “Inclusive Education Prespectives and Challenges”, 6th and 7th March 2015, Karnataka State Open University, Department of Studies and Research in Education In collaboration with CBR Network,Banglore. ISSN: 978-81-910849-11-6.
3.   Education Of Indian Muslim Girls’ child in the backdrop of Globalisation,
By  Danamma Zalaki,Impact of Globalisation onIndian Society, ISSN:978-81-910788-9-3, Pranati,Working Organization For Women and Child, Banglore.,2015.
4.   Integration Of Gandhian views and New Developments in Education (Reference to Muslim Girls), By Danamma. C. Zalaki, Special Issue UGC Sponsored two day State Level Seminar On Relevance of Mahatma Gandhiji’s Vision to the New Educational Challenges, ISBN:2278-0319, 22nd&23rd Aug 2015.
5.   Protection of Child Rights in India: Role of Teachers and Parents, by Danamma. C. Zalaki. Special Issue UGC Sponsored two day State Level Seminar On Human Rights Education Challenge before Teacher education,ISBN:2277-7644

ಸಮಾಜ ವಿಜ್ಞಾನ ಬ್ಲಾಗ್‍ದಲ್ಲಿ, ಡಿಜಿಟಲ್ ಟೀಮ್ ಸದಸ್ಯಳಾಗಿ ಕಾರ್ಯ ಮಾಡುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.  ಹಾಗೂ ಡಿಜಿಟಲ್ ಟೀಮ್ ದ ಅನ್ವೇóಷಣೆ ಸಾಹಿತ್ಯ ರಚನೆಯಲ್ಲಿ ತಮ್ಮ ಸೇವೆಯನ್ನು ಮಾಡಿದ್ದಾರೆ.

ಶಶಿಧರ್ ಗುಂಡ್ಲೂರು


ಸಂಜೀವ್ ಕುಂದಗೋಳ್




ಸಂಜೀವ ಕುಂದಗೋಳ
ಮೂಲತಃ ಧಾರವಾಡ ಜಿಲ್ಲೆ ಬಂಡಾಯ ನಗರಿ ನವಲಗುಂದದ ರೈತ ಕುಟುಂಬದಲ್ಲಿ  ಜನಿಸಿದ ಇವರು ಪ್ರಸ್ತುತ ಧಾರವಾಡ ತಾಲ್ಲೂಕಿನ ಶ್ರೀಕ್ಷೇತ್ರ ಹೆಬ್ಬಳ್ಳಿಯ ನೆಹರು ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಪ್ರೌಢಶಾಲಾ ವಿಭಾಗದಲ್ಲಿ 2006 ರಿಂದ ಸಮಾಜ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಯುತರು ಧಾರವಾಡ ಜಿಲ್ಲೆಯಲ್ಲಿ ಶ್ರೀಮತಿ ಶಿವಲೀಲಾ ವಿನಯ್ ಕುಲಕರ್ಣಿ ನೇತೃತ್ವದ ವೈಶುದೀಪ ಪೌಂಡೇಶನ್ ವತಿಯಿಂದ ಶಾಲೆಗೆ ಬನ್ನಿ ಶನಿವಾರ, ವಿದ್ಯಾರ್ಥಿಗಳಿಗೆ ಪೋನ್ ಇನ್ ಕಾರ್ಯಕ್ರಮ ಮತ್ತು ಧಾರವಾಡ ಜಿಲ್ಲೆಯ ಮಕ್ಕಳಿಗೆ ಅನುಕೂಲ ಆಗಲೆಂದು ಸಮರ್ಥ ಎಂಬ ಪುಸ್ತಕ ರಚಿಸಿದ್ದಾರೆ.ಸಮಾಜ ವಿಜ್ಞಾನ ಶಿಕ್ಷಕರುಗಳು ಇಲ್ಲದ ಶಾಲೆಗೆ ಪ್ರತಿ ಶನಿವಾರ ವಿಶೇಷ ತರಗತಿಗಳನ್ನು ನಿಸ್ವಾರ್ಥದಿಂದ ನಡೆಸುತ್ತಿದ್ದಾರೆ.
          ಪ್ರತಿ ವರ್ಷವು ಇವರು ತಮ್ಮ ಶಾಲೆಯ 10 ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಉನ್ನತ ವ್ಯಾಸಂಗಕ್ಕೆ ಆರ್ಥಿಕ ಸಹಾಯವನ್ನು ನೀಡುತ್ತಿದ್ದಾರೆ.
ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಸಾಮನ್ಯ ಜ್ಞಾನ ಹೆಚ್ಚಿಸಿಕೊಳ್ಳಲು ಸಹಾಯವಾಗಲೆಂದು ಇವರು ತಮ್ಮ ಶಾಲೆಯಲ್ಲಿ ಪ್ರತಿದಿನ 5 ದಿನ ಪತ್ರಿಕೆ ಮತ್ತು ವಾರ ಪತ್ರಿಕೆ ಕೆಲವು ಮಾಸಿಕ ಪತ್ರಿಕೆಗಳನ್ನು ತಮ್ಮ ಸ್ವ ಖರ್ಚಿನಿಂದ ಮಕ್ಕಳಿಗೆ  ಕಳೆದ 4 ವರ್ಷಗಳಿಂದ ನೀಡುತ್ತಿದ್ದಾರೆ.
ಶ್ರೀಯುತರು  ಶಾಲೆಯ ವಿದ್ಯಾರ್ಥಿಗಳು ಕಳೆದ ಮೂರು ವರ್ಷಗಳಿಂದ  ಧಾರವಾಡ ಜಿಲ್ಲೆಯಲ್ಲಿ ಜಿಲ್ಲೆಗೆ ಟಾಪ್ 10 ಪಟ್ಟಿಯಲ್ಲಿ ಆಯ್ಕೆಗೊಂಡಿದ್ದಾರೆ

ಪ್ರಹ್ಲಾದ್ ವಾ ಪತ್ತರ್


ಶ್ರೀನಿವಾಸ್ .ಕೆ.ಜೆ


ರಾಜೇಶ್ .ಎನ್


ಶಿಲ್ಪ .ಆರ್


ಮಂಜುನಾಥ್ .ಎಸ್


ಕೊಟ್ರೇಶಿ .ವಿ



ವಿ.ಕೊಟ್ರೇಶಿ ಆದ ನಾನು 1993-94 ರಿಂದ 1996-97 ರವರೆಗೆ ಖಾಸಗಿ ಪ್ರೌಢ ಶಾಲೆಯಲ್ಲಿ ಮುಖ್ಯೋಪಾಧ‍್ಯಾಯನಾಗಿ ಕೆಲಸ ನಿರ್ವಹಿಸಿದ್ದೇನೆ.
1997 ಫೆಬ್ರವರಿಯಲ್ಲಿ ಸರಕಾರಿ ಪ್ರೌಢಶಾಲೆ ಗೆ ನೇಮಕಗೊಂಡೆನು. ಮೊದಲಯ ನನ್ನ ಕೆಲಸ ಕಲಬುರ್ಗಿ ಜಿಲ್ಲಿ ಸೇಡಂ ತಾಲೂಕಿನ ಹಾಬಾಳ (ಟಿ) ಗ್ರಾಮದಲ್ಲಿ ಪ್ರಾರಂಭವಾಯಿತು.2001 ರಂದ 2010 ರವರೆಗೆ  ಬಳ್ಳಾರಿ ಜಿಲ್ಲಾ ಹೊಸಪೇಟೆ ತಾಲೂಕಿನ ಸ.ಪ.ಪೂ.ಕಾಲೇಜ್ ಮರಿಯಮ್ಮನಹಳ್ಳಿ ಯಲ್ಲಿ ಕೆಲಸ ಮಾಡಿದ್ದೇನೆ . ಪ್ರಸ್ತುತ 2010 ರಿಂದ  ಬಳ್ಳಾರಿ ಜಿಲ್ಲಾ ಕೊಟ್ಟೂರು ತಾಲೂಕಿನ  ಹ್ಯಾಳ್ಯಾ ಗ್ರಾಮದ ಸರಕಾರಿ ಪ್ರೌಢಶಾಲೆ ಕಾರ್ಯ ನಿರ್ವಹಿಸಸುತ್ತಿದ್ದೇನೆ.
2012 ರಲ್ಲಿ  ಎಸ್ ಟಿ ಎಫ್  ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿ, 2014-15,2015-16,2017-18 ರಲ್ಲಿ ಸಮಾಜವಿಜ್ಞ್ನಾನ ವಿಷಯದ ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿ, ಹ್ಯದ್ರಾಬಾದ್ ಕರ್ನಾಟಕದ ಬಿ ಇಡಿ; ಡಿ ಇಡಿ; ವಿದ್ಯಾರ್ಥಿಗಳಿಗೆ ಟೆಟ್ ಪರೀಕ್ಷೆಗೆ ಸಂಪನ್ಮೂಲ ತರಬೇತುದಾರನಾಗಿ ಕೂಡ್ಲಿಗಿ ತಾಲೂಕಿನಲ್ಲಿ  ಕೆಲಸ ಮಾಡಿದ್ದೇನೆ.
2016 ರಿಂದ ಡಿಜಿಟಲ್ ಟೀಮಿನ ಸದಸ್ಯನಾಗಿ ಅಳಿಲ ಸೇವೆ ಮಾಡಿದ್ದೇನೆ.
ಡಿಜಿಟಲ್ ಟೀಮಿನ ಕೆಲಸ ಕಾರ್ಯಗಳನ್ನ ನಮ್ಮ ನಾಡಿನ ಪೂಜ್ಯರಾದ  ಶ್ರೀ 1011 ತರಳುಬಾಳು ಜಗದ್ ಗುರುಗಳು  ಗುರುತಿಸಿ ಆಶೀರ್ವಾದ ಮಾಡಿದ್ದಾರೆ.
ನಮ್ಮ ಇಲಾಖೆಯ ಹೆಮ್ಮೆಯ  ಅಧಿಕಾರಿಗಳಾದ  ಹಿರೇಮಠ ಸರ್, ವೀರಣ್ಣ ಎಸ್ ಜತ್ತಿ ಸರ್, ಇನ್ನು ಮುಂತಾದ ವರು ಗುರುತಿಸಿದ್ದಾರೆ.
ನಮ್ಮ ನಾಡಿನ ಪಬ್ಲಿಕ್ ಟಿ ವಿ  ನಮ್ಮ ತಂಡವನ್ನ ಪಬ್ಲಿಕ್ ಹೀರೋ ಮಾಡಿ,ದಿನಾಂಕ:9-8-2016 ರಂದು ಪ್ರಚಾರ ಮಾಡಿದೆ.
ಡಿಜಿಟಲ್ ತಂಡ ಎಂದರೆ ಅದು ಜೀನಿಯಸ್, ಬುಧ್ದಿವಂತ,ಉನ್ನತಿ,ಉತ್ತೀರ್ಣ, ಇನ್ನೂ…….. ಎನೇನೋ ಆಗಿದೆ.
ಡಿಜಿಟಲ್ ತಂಡ ರಾಮಚಂದ್ರಸರ್ ಮುಖಂಡತ್ವದಲ್ಲಿ ಸಂತೋಷ್, ಮಹದೇವಪ್ಪ ಕುಂದರಗಿ, ವಾಸು ಶ್ಯಾಗೋಟಿ, ನಾಗಣ್ಣ ಶಹಬಾದ್, ಅಕ್ಕ ದಾನಮ್ಮ ಝಳಕಿ, ರಮೇಶ.ಚನ್ನಗಿರಿ,ರಮೇಶ.ಹುನಗುಂದ, ಮಲ್ಲಿಕಾರ್ಜುನ,ಪ್ರಹ್ಲಾದ್.ಪತ್ತಾರ್, ಪ್ರಶಾಂತ್,ಕಾಂತೇಶ‍್,ಪ್ರೇಮನ ಗ್ಔಡ, ವೀರೇಶ,ಪ್ರದೀಪ್ ಸರ್ ಮುಂತಾದ ಅತಿರಥ ಮಹಾರಥ ರಂತ ವರ ಜೊತೆ ಕೆಲಸ ಮಾಡೋದೆ ಒಂದು ಥ್ರಿಲ‍್ ಅಂತಾನೆ ಹೇಳಬಹುದು.
ಡಿಜಿಟಲ್ ತಂಡದ ಜೊತೆ ಕೆಲಸ ಮಾಡೋದು ಹಾಗೂ ಅದರಿಂದ ರೂಪಿತವಾದ ಸಂಪನ್ಮೂಲ ಬಳಕೆಯಿಂದ ವಿಷಯ ಸುಲಲಿತವಾಗಿದೆ.


ರಾಮಚಂದ್ರಪ್ಪ ಹೆಚ್.ಎಸ್