Showing posts with label RESOURCE PERSONS. Show all posts
Showing posts with label RESOURCE PERSONS. Show all posts

Tuesday, 1 May 2018

ಕಲ್ಲಯ್ಯ ಹಿರಢಮಠ


Saturday, 17 March 2018

ರಾಮಚಂದ್ರ .ಕೆ.ಎಸ್




ರಾಮಚಂದ್ರ ಕರೂರು ಸೀನಪ್ಪ
    ಶ್ರೀಯುತ ರಾಮಚಂದ್ರ ಕರೂರು ಸೀಪ್ಪನವರು ಶಿವಮೊಗ್ಗ ನಗರದಲ್ಲಿ ವಾಸವಾಗಿದ್ದು ದಿನಾಂಕ ೦೪-೦೨-೧೯೭೪ರಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಜನಿಸಿರುತ್ತಾರೆ. ಇವರು ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ, ಜೋಗ, ಕಾರ್ಗಲ್, ಭದ್ರಾವತಿ, ತಿರ್ಥಹಳ್ಳಿಯಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿದ್ದು ಎಂ.ಎ. ಬಿ.ಇಡಿ. ಪದವಿಧರರಾಗಿದ್ದಾರೆ. ಇವರು ದಿನಾಂಕ ೦೩-೦೧-೨೦೬ರಂದು ಸರ್ಕಾರಿ ಪ್ರೌಢಶಾಲಾ ಶಿಕ್ಷಕರಾಗಿ ಸರ್ಕಾರಿ ಪ್ರೌಢಶಾಲೆ ಅತ್ತಿಹಳ್ಳಿ ಕನಕಪುರದಲ್ಲಿ ನೇಮಕಗೊಂಡು ಪ್ರಸ್ತುತ ಸರ್ಕಾರಿ ಪ್ರೌಢಶಾಲೆ ಟಿ.ಗೋಪಗೊಂಡನಹಳ್ಳಿ ನ್ಯಾಮತಿ ತಾ. ದಾವಣಗೆರೆ ಜಿಲ್ಲೆಯಲ್ಲಿ ಸಮಾಜವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
     ಶ್ರೀಯುತರು ರಚನಾ ೨ ಮತ್ತು ೩ರಲ್ಲಿ ಜಿಲ್ಲಾ ಎಂ.ಆರ್.ಪಿ.ಯಾಗಿ ಕಾರ್ಯನಿರ್ವಹಿಸಿದ್ದು ಸುಗಮ ಹಾಗೂ ಜನರಲ್ ಕಾರ್ಯಗಾರದಲ್ಲಿ ಐಸಿಟಿ ಇನ್ ಕ್ಲಾಸ್ ರೂಪ್ ವಿಷಯದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿರುತ್ತಾರೆ. ಅಲ್ಲದೆ ಕೋಯರ್ನ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿರುತ್ತಾರೆ.
     ರಾಮಚಂದ್ರರವರು ಪ್ರಸ್ತುತ ಕರ್ನಾಟಕ ಸರ್ಕಾರದ ವಿಶಿಷ್ಟ ಯೋಜನೆಯಾದ ಪ್ರಾಥಮಿಕ ಶಾಲಾ ಶಿಕ್ಷಕರ ಬಲವರ್ಧನೆಗಾಗಿ ರೂಪುಗೊಂಡ ’ಗುರುಚೇತನ’ ಕಾರ್ಯಕ್ರಮದಲ್ಲಿ ರಾಜ್ಯಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ’ಅಕ್ಷಾಂಶ ಮತ್ತು ರೇಖಾಂಶ’ , ’ಸಂವಿಧಾನ ಪರಿಕಲ್ಪನೆ’ ಹಾಗೂ ’ಶಿಕ್ಷಕರ ಬಲವರ್ಧನೆಯಲ್ಲಿ ಐಸಿಟಿಯ ಪಾತ್ರ’ ಮಾಡ್ಯೂಲ್ ನಿರ್ಮಾಣದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅದರ ಅನುಷ್ಟಾನ ಕಾರ್ಯಗಾರದಲ್ಲೂ ಭಾಗವಹಿಸಿರುತ್ತಾರೆ. ಪ್ರಸ್ತುತ ’ಮಾರುತಗಳು’ ಮಾಡ್ಯೂಲ್ ನಲ್ಲಿ ಮೆಂಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
     ಇವರು ತಮ್ಮ ವೃತ್ತಿಯಲ್ಲಿ ಯಶಸ್ವಿ ಶಿಕ್ಷಕರಾಗಿ ತೊಡಗಿಕೊಂಡಿದ್ದು ಅನೇಕ ಪ್ರಶಸ್ತಿಗಳಿಗೂ ಬಾಜನರಾಗಿರುತ್ತಾರೆ. ಇವರು ೨೦೦೭ರಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆಗಾಗಿ ಮೈಕ್ರೋಸಾಪ್ಟ್ ಇಂಡಿಯಾರಿಂದ ’ITLA’ (Inovative Teachers Leadership Award) ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿರುತ್ತಾರೆ. ೨೦೦೮ರಲ್ಲಿ ಮೈಕ್ರೋಸಾಪ್ಟ್ ಇಂಡಿಯ ಹಾಗೂ ಯುನೆಸ್ಕೋರವರ ಸಹಯೋಗದಲ್ಲಿ ವಿಯೇಟ್ನಾಮ್ನ ರಾಜಧಾನಿ ’ಹಾನೊಯ್’ನಲ್ಲಿ ನಡೆದ ಆಸ್ಟ್ರೋ ಏಷ್ಯಾ ರೀಜಿನಲ್ ಕಾನ್ಪರೆನ್ಸ್ ನಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿರುತ್ತಾರೆ. ೨೦೧೬ರಲ್ಲಿ ಇವರಿಗೆ ದಾವಣಗೆರೆಯ ಜಿಲ್ಲೆಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅಲ್ಲದೆ ಇದೇ ವರ್ಷ ಪಬ್ಲಿಕ್ ಟಿ.ವಿ.ಯ ಪಬ್ಲಿಕ್ ಹೀರೋ ಆಗಿ ಡಿಜಿಟಲ್ ತಂಡದ ಪರವಾಗಿ ಗೌರವಿಸಲಾಗಿದೆ.

ಸಂತೋಷ್ ಕುಮಾರ್ .ಸಿ




ಸಂತೋಷ್ ಕುಮಾರ್ .ಸಿ

    ಇವರು ಮೂಲತಃ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಸುರಹೊನ್ನೆ ಗ್ರಾಮದವರು. 2010ನೇ ಸಾಲಿನಲ್ಲಿ ಪ್ರೌಢಶಾಲಾ ಸಹಶಿಕ್ಷಕರಾಗಿ ಸರ್ಕಾರಿ ಪ್ರೌಢಶಾಲೆ ಬನ್ನಿಕಲ್ಲು, ಹಗರಿಬೊಮ್ಮನ ಹಳ್ಳಿ ತಾಲ್ಲೂಕು ಬಳ್ಳಾರಿ ಜಿಲ್ಲೆ ಇಲ್ಲಿಗೆ ನಿಯೋಜನೆಗೊಂಡರು. ಪ್ರಸ್ತುತ ಇದೇ ಶಾಲೆಯಲ್ಲಿ ಕೆಳದ ಏಳು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
   ರಚನಾ-3 ತರಬೇತಿ ಕಾರ್ಯಾಗಾರ ಎಂ.ಆರ್.ಪಿ. ಯಾಗಿಯೂ ಕೆಲಸ ಮಾಡಿರುವ ಇವರು 2016ರಲ್ಲಿ ಪ್ರಾರಂಭವಾದ ಸಮಾಜ ವಿಜ್ಞಾನ ಎಸ್.ಟಿ.ಎಫ್ ಡಿಜಿಟಲ್ ತಂಡ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದಾರೆ. ಸಮಾಜ ವಿಜ್ಞಾನ ಎಸ್.ಟಿ.ಎಫ್ ಡಿಜಿಟಲ್ ತಂಡದ ಸಕ್ರಿಯ ಸದಸ್ಯರಾಗಿರುವ ಇವರು ಸಮಾಜ ವಿಜ್ಞಾನ ಸಂಪನ್ಮೂಲಗಳ ಹಂಚಿಕೆಗೆ ಸಹಕಾರಿಯಾಗಿರುವ ಸಮಾಜ ವಿಜ್ಞಾನ ಬ್ಲಾಗ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಸಹಕಾರಿಯಾಗಿರುವ ಸಕ್ಸಸ್ ಬ್ಲಾಗ್ ಮತ್ತು ಜೀನಿಯಸ್ ಬ್ಲಾಗ್ ಗಳ ನಿರ್ಮಾತೃವಾಗಿದ್ದಾರೆ.
   8, 9, 10ನೇ ತರಗತಿಗಳ ಹಲವು ಆಕರ್ಷಕ ಪಿಪಿಟಿಗಳು, ನಮ್ಮ ಚಾಣಕ್ಯ ಹಾಗೂ ಮಾಸ್ಟರ್ ಆಫ್ ಸೋಷಿಯಲ್ ಸೈನ್ಸ್ ಎಂಬ ಬಹುಆಯ್ಕೆ ಪ್ರಶ್ನೆಗಳ ಕ್ಷಿಜ್, ಲಕ್ಕಿ ನಂಬರ್ ಎಂಬ ಒಂದು ಅಂಕದ ಪ್ರಶ್ನೆಗಳ ಕ್ವಿಜ್, ಜಾಕ್ ಪಾಟ್ ಎಂಬ ಎರಡು ಅಂಕದ ಪ್ರಶ್ನೆಗಳ ಕ್ವಿಜ್ (ಪಿಪಿಟಿ ಆಧಾರಿತ), ಆನ್ ಲೈನ್ ಕ್ವಿಜ್ ಗಳನ್ನು ತಯಾರಿಸಿದ್ದಾರೆ.
   ಹತ್ತನೇ ತರಗತಿಯ ಫಲಿತಾಂಶ ಸುಧಾರಣೆಗಾಗಿ “ಜೀನಿಯಸ್” ಎಂಬ ಸ್ಕೋರಿಂಗ್ ಪ್ಯಾಕೇಜ್, ಸಿದ್ಧತೆಯೆಂಬ ಪ್ರಶ್ನೆಪತ್ರಿಕೆಗಳ ಮಾಲಿಕೆ, ಪಾಸಿಂಗ್ ಕಾರ್ಡ್ಸ್, ಮಿಷನ್-28, ಮಿಷನ್ ಒನ್ ಮಾರ್ಕ್ಸ್ ಹೀಗೆ ಹಲವು ಪಾಸಿಂಗ್ ಪ್ಯಾಕೇಜ್ ಗಳನ್ನು ಸಿದ್ಧಪಡಿಸಿದ್ದಾರೆ. ಹತ್ತನೇ ತರಗತಿಯ ಪಾಠಗಳ ಸಂಪೂರ್ಣ ವಿಡಿಯೋ ನೋಟ್ಸ್ ಹಾಗೂ ಆಡಿಯೋ ನೋಟ್ಸ್ ಗಳನ್ನು ತಯಾರಿಸಿದ್ದಾರೆ. ಅಲ್ಲದೇ ಡಿಜಿಟಲ್ ತಂಡದಿಂದ ಹೊರಬಂದಿರುವ ಅನ್ವೇಷಣೆ, ಸವಿ ದಿಕ್ಸೂಚಿ, ಎಕ್ಸಲೆಂಟ್, ಬ್ರಿಲಿಯಂಟ್, ಸಿ.ಎಸ್.ಎ.ಎಸ್ ನೋಟ್ಸ್ ಹೀಗೆ ಪ್ರತಿಕಾರ್ಯದಲ್ಲಿಯೂ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. 

ಮಹದೇವಪ್ಪ ಕುಂದರಗಿ




ಮಹಾದೇವಪ್ಪ ಕುಂದರಗಿ, ಸಹ ಶಿಕ್ಷಕರು
ಸರ್ಕಾರಿ ಪ್ರೌಢ ಶಾಲೆ ಆವತಿ, ಚಿಕ್ಕಮಗಳೂರು ತಾ & ಜಿ.
ಮೊ : 9481216233
ಇವರು ಮೂಲತಃ ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕಿನ ಕೌಜಲಗಿ ಗ್ರಾಮದವರು. ಪ್ರೌಢ ಶಾಲಾ ಸಹ ಶಿಕ್ಷಕರಾಗಿ 2010 ರಲ್ಲಿ ಸೇವೆಗೆ ಸೇರಿದ್ದು ಚಿಕ್ಕಮಗಳೂರಿನ ಸರ್ಕಾರಿ ಪ್ರೌಢ ಶಾಲೆ ಆವತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೊಯೆರ್ (ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲ) ನಲ್ಲಿ ರಾಜ್ಯಮಟ್ಟದ ಸಂಪನ್ಮೂಲ ತಯಾರಿಕಾ ಸದಸ್ಯರಾಗಿ ಹಾಗೂ ಸಮಾಜ ವಿಜ್ಞಾನ ವಿಷಯ ಶಿಕ್ಷಕರ ವೇದಿಕೆ (ಎಸ್.ಟಿ.ಎಫ್) ತರಬೇತಿ, ರಚನಾ ತರಬೇತಿ, ಸಾಮಾನ್ಯ ವಿಷಯಗಳ ತರಬೇತಿ ಹಾಗೂ ಸಿ.ಸಿ.ಇ. ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಎಸ್.ಎಸ್.ಎಲ್.ಸಿ.ಯ ಜಿಲ್ಲಾ ಹಾಗೂ ವಿಭಾಗ ಮಟ್ಟದ ನೀಲನಕಾಶೆ ಕಾರ್ಯಾಗಾರಗಳಲ್ಲಿ ಭಾಗವಹಿಸಿ ಸಾಕಷ್ಟು ಅನುಭವ ಪಡೆದ ಇವರು ಎಸ್.ಎಸ್.ಎಲ್.ಸಿ. ಗೆ ಸಂಬಂಧಿಸಿದ ಪದಬಂಧಗಳು, ಪಿರಾಮಿಡ್ಡುಗಳು, ಸವಿ ದಿಕ್ಸೂಚಿ (ಹಿಂದಿನ ಪ್ರಶ್ನೆಪತ್ರಿಕೆಗಳ ವಿಶ್ಲೇಷಣೆ), ಅನ್ವೇಷಣೆ (ಚಟುವಟಿಕೆಗಳ ಕೈಪಿಡಿ) ಇವರ ನೇತೃತ್ವದಲ್ಲಿ ಮೂಡಿಬಂದ ರಚನೆಗಳಾಗಿವೆ. ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದ ಪಿಪಿಟಿ, ರಸಪ್ರಶ್ನೆಗಳ ಪಿಪಿಟಿ ಹಾಗೂ ನೋಟ್ಸ್ ಮುಂತಾದ ಸಂಪನ್ಮೂಲಗಳ ತಯಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಇವರು ಡಿಜಿಟಲ್ ತಂಡದ ಒಬ್ಬ ಸಕ್ರಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಸಂತ್ ಕುಮಾರ್ ಶ್ಯಾಗೋಟಿ



ವಸಂತಕುಮಾರ ಶ್ಯಾಗೋಟಿ. ಸಹ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ ಹದಲಿ. ತಾ : ನರಗುಂದ,ಜ ಜಿ:ಗದಗ
ಮೊ: 9964031435
    ಇವರು ಮೂಲತ: ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಚಿಕ್ಕಸವನೂರ ಗ್ರಾಮದವರು. ಪ್ರೌಢಶಾಲಾ ಸಹ ಶಿಕ್ಷಕರಾಗಿ 200 8 ರಲ್ಲಿ ಸೇವೆಗೆ ಸೇರಿದ್ದು ಹಾಸನ ಜಿಲ್ಲೆ, ಆಲೂರು ತಾಲೂಕು ಕಲ್ಲಾರೆ ಗ್ರಾಮದಲ್ಲಿ 7ವರ್ಷ ಸೇವೆ ಸಲ್ಲಿಸಿ ಪ್ರಸ್ತುತ  ಗದಗ ಜಿಲ್ಲೆಯ ನರಗುಂದ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಹದಲಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಮಾಜವಿಜ್ಞಾನ ಎಸ್.ಟಿ.ಎಫ್. ಡಿಜಿಟಲ್ ಗ್ರೂಪ್ನ ಒಬ್ಬ ಕ್ರಿಯಾಶೀಲ ಸದಸ್ಯರಾಗಿದ್ದು ಎಸ್.ಎಸ್.ಎಲ್.ಸಿ ಸಮಾಜವಿಜ್ಞಾನ ವಿಷಯದ "ಉತ್ತೀರ್ಣ" ಪಾಸಿಂಗ್ ಮತ್ತು ಸ್ಕೋರಿಂಗ್ ಪ್ಯಾಕೇಜ್ ತಯಾರಿಸಿರುತ್ತಾರೆ. ಇವರ ನೇತೃತ್ವದಲ್ಲಿ 8ನೇ ತರಗತಿಯ ಸಮಾಜವಿಜ್ಞಾನ ನೋಟ್ಸ್ "ಬ್ರಿಲಿಯಂಟ್" "ಎನ್.ಎಮ್.ಎಮ್.ಎಸ್". ನೋಟ್ಸ್ ತಯಾರಿಸಲಾಗಿದೆ ಹಾಗೂ ತಂಡದ ವಿವಿಧ ಕೊಡುಗೆಗಳಲ್ಲಿ ಸಕ್ರೀಯ ಸದಸ್ಯರಾಗಿ ಭಾಗವಹಿಸಿದ್ದಾರೆ. 8 ನೇ ತರಗತಿಯ ಸಂಪೂರ್ಣ ಅಧ್ಯಾಯಗಳಿಗೆ  "ನಮ್ಮ ಚಾಣಕ್ಯ" ಎನ್ನುವ ಕ್ವಿಜ್ ಪಿಪಿಟಿ ಗಳನ್ನು ತಯಾರಿಸಿರುತ್ತಾರೆ. ಸಮಾಜ ವಿಜ್ಞಾನ ವಿಷಯದ ಅನೇಕ ಪಿಪಿಟಿ ಗಳನ್ನು ಮಾಡಿ ಡಿಜಿಟಲ್ ಸಂಪನ್ಮೂಲಗಳ ತಯಾರಿಕೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುತ್ತಾರೆ.  ಡಿ.ಎಸ್.ಇ.ಆರ್.ಟಿ ಯ ಇ-ಕಟೆಂಟ್ ತಯಾರಿಕಾ ಸದಸ್ಯರಾಗಿ, ಫಲಿತಾಂಶ ಸುಧಾರಣಾ ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ್ದಾರೆ.  ಪಿಪಿಟಿ, ರಸಪ್ರಶ್ನೆಗಳು, ಪ್ರಶ್ನೆ ಪತ್ರಿಕೆಗಳು ಮುಂತಾದ ಸಂಪನ್ಮೂಲಗಳ ತಯಾರಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಇವರು ಡಿಜಿಟಲ್ ತಂಡದ ಒಬ್ಬ ಸಕ್ರಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಶಾಂತ್ .ಟಿ




ಪ್ರಶಾಂತ ಟಿ ಕೆ
ಸಹ ಶಿಕ್ಷಕರು, ಸ.ಪ.ಪೂ.ಕಾಲೇಜು (ಪ್ರೌ.ಶಾ.ವಿ),
ಲಿಂಗದಹಳ್ಳಿ, ತರೀಕೆರೆ ತಾ||, ಚಿಕ್ಕಮಗಳೂರು ಜಿಲ್ಲೆ.
 ಇವರು 05-11-1998 ರಂದು ಸರ್ಕಾರಿ ಪ್ರೌಢಶಾಲೆ, ಅಂಗಡಿ ಗ್ರಾಮ, ಚಿಕ್ಕಮಗಳೂರು ಜಿಲ್ಲೆ ಇಲ್ಲಿ ಸಮಾಜ ವಿಜ್ಞಾನ ಶಿಕ್ಷಕರಾಗಿ ಸೇವೆಯನ್ನು ಆರಂಭಿಸಿ, ಪ್ರಸ್ತುತ ಸ.ಪ.ಪೂ.ಕಾಲೇಜು (ಪ್ರೌ.ಶಾ.ವಿ), ಲಿಂಗದಹಳ್ಳಿ, ತರೀಕೆರೆ ತಾ||, ಚಿಕ್ಕಮಗಳೂರು ಜಿಲ್ಲೆ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.ಸಮಾಜ ವಿಜ್ಞಾನ ವಿಷಯದ ರಚನಾ ಹಾಗೂ ಸುಗಮ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. 2016 ರಿಂದ ಸಮಾನ ಮನಸ್ಸಿನ ಡಿಜಿಟಲ್ ತಂಡದಲ್ಲಿ ಒಬ್ಬ ಸದಸ್ಯರಾಗಿರುತ್ತಾರೆ.ಕನ್ನಡ ಮಾಧ್ಯಮದ ಜೊತೆಗೆ ಇಂಗ್ಲಿಷ್ ಮಾಧ್ಯಮದಲ್ಲಿಯೂ ಸಹ ಸಂಪನ್ಮೂಲ ತಯಾರಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ವೀರೇಶ್ .ಪಿ