
ದಿನಾಂಕ 19:10:2016ರಂದು ಶ್ರೀ ಕ್ಷೇತ್ರ ಸಿರಿಗೆರೆಯಲ್ಲಿ ತರಳಬಾಳು ವಿದ್ಯಾಸಂಸ್ಥೆಗಳ ರಾಜ್ಯದ ಎಲ್ಲಾ ಸಮಾಜವಿಜ್ಞಾನ ಶಿಕ್ಷಕರಿಗೆ ಒಂದು ದಿನದ ಇ-ಟೀಚಿಂಗ್ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಡಿಜಿಟಲ್ ಗ್ರೂಪಿನ ಮಲ್ಲಿಕಾರ್ಜುನ್, ಶ್ರೀನಿವಾಸ್, ಸಂತೋಷ್ ಹಾಗೂ ರಾಮಚಂದ್ರರವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ನಂತರ ಗುರುಗಳ ಶಾಂತಿವನದಲ್ಲಿ ಅಧಿಕಾರಿವರ್ಗ ಹಾಗೂ ಶಿಕ್ಷಕರು ಗುರುಗಳ ಸಮ್ಮುಖದಲ್ಲಿ ಡಿಜಿಟಲ್ ಸಂಪನ್ಮೂಲದ ಪರಿಚಯವನ್ನು ಮಾಡಿಕೊಡಲಾಯಿತು.
...